ಹೈದರಬಾದ್, ಡಿ 06( DaijiworldNews/MS): ಎಟಿಎಂನಿಂದ ಹಣ ವಿಥ್ಡ್ರಾ ಮಾಡುವುದು ಸಾಮಾನ್ಯ ಸಂಗತಿ. ಆದರೆ ಎಟಿಎಂನಿಂದ ಚಿನ್ನ ಪಡೆದುಕೊಂಡಿದ್ದಿರಾ.? ಇಲ್ಲವಾದರೆ ಹೈದರಾಬಾದ್ನ ಎಟಿಎಂ ಒಂದರಲ್ಲಿ ಬಂಗಾರವನ್ನ ಪಡೆದುಕೊಳ್ಳಬಹುದು
ಹೌದು ಗೋಲ್ಡ್ಸಿಕ್ಕಾ್ ಹೈದರಾಬಾದ್ನಲ್ಲಿ ವಿಶ್ವದ ಮೊದಲ ಗೋಲ್ಡ್ ಎಟಿಎಂ ಅನ್ನು ಪ್ರಾರಂಭಿಸಿದೆ. ಇದು ವಿಶ್ವದ ಮೊದಲ ರಿಯಲ್-ಟೈಮ್ ಗೋಲ್ಡ್ ಎಟಿಎಂ ಆಗಿದೆ. ಈ ಮೂಲಕ ಗೋಲ್ಡ್ಸಿಕ್ಕಾ ಗ್ರಾಹಕರು ಆಭರಣ ಮಳಿಗೆಗೆ ಭೇಟಿ ನೀಡದೆ ಎಟಿಎಂಗಳಿಂದಲೇ ಚಿನ್ನ ಖರೀದಿಸಬಹುದಾಗಿದೆ.
ಗೋಲ್ಡ್ ಎಟಿಎಂ ಮೂಲಕ ಜನರು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನ ಖರೀದಿಸಬಹುದು. 999 ಪರಿಶುದ್ಧತೆಯ ಚಿನ್ನದ ನಾಣ್ಯಗಳು ಎಟಿಎಂನಲ್ಲಿ ದೊರೆಯಲಿದೆ. ಯಂತ್ರದ ಸ್ಕ್ರೀನ್ನಲ್ಲಿ ಚಿನ್ನದ ನಾಣ್ಯದ ವಿವರಗಳು ಕಾಣಿಸಲಿವೆ. ಕಾರ್ಡ್ ಮೂಲಕ ಪಾವತಿ ಮಾಡಿ ಚಿನ್ನದ ನಾಣ್ಯಗಳನ್ನು ವಿತ್ಡ್ರಾ ಮಾಡಬಹುದಾಗಿದೆ.
ಚಿನ್ನದ ನಾಣ್ಯಗಳು 0.5 ಗ್ರಾಂನಿಂದ 100 ಗ್ರಾಂ ವರೆಗಿನ ಮೌಲ್ಯಗಳಲ್ಲಿ ಲಭ್ಯವಿದೆ. ಒಬ್ಬರು 0.5 ಗ್ರಾಂಗಿಂತ ಕಡಿಮೆ ಅಥವಾ 100 ಗ್ರಾಂಗಿಂತ ಹೆಚ್ಚು ಚಿನ್ನವನ್ನು ಖರೀದಿಸಲು ಸಾಧ್ಯವಿಲ್ಲ.