ಬೆಂಗಳೂರು, ಡಿ 06 (DaijiworldNews/DB): ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನಿನ್ನೆ (ಡಿಸೆಂಬರ್ 5) ಇಟಲಿ ಪ್ರವಾಸಕ್ಕೆ ತೆರಳಿದ್ದು, ಕೃಷಿ ಉತ್ಪನ್ನಗಳ ರಫ್ತು ವ್ಯವಹಾರ ಕುರಿತು ಇಟಲಿ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದಾರೆ.
ಇಟಲಿಯ ಕೃಷಿ ಸಚಿವ ಪ್ರಾನ್ಸಿಸ್ಕೋ ಲೊಲ್ಲೋಬ್ರಿಗಿದಾ ಅವರನ್ನು ಸಚಿವೆ ಶೋಭಾ ಕರಂದ್ಲಾಜೆ ಅವರು ಇಟಲಿಯ ರೋಮ್ ನಗರದಲ್ಲಿ ಭೇಟಿಯಾದರು.
ಉಭಯ ದೇಶಗಳ ನಡುವೆ ಕೃಷಿ ರಫ್ತು, ಕೃಷಿ ಕ್ಷೇತ್ರದಲ್ಲಿನ ಅಭಿವೃದ್ದಿಗೆ ನೂತನ ತಂತ್ರಜ್ಞಾನಗಳ ಅಳವಡಿಕೆ ಮತ್ತು ಪರಸ್ಪರ ವರ್ಗಾವಣೆ ಸೇರಿದಂತೆ ಹಲವು ರಾಜತಾಂತ್ರಿಕ ವಿಚಾರಗಳ ಕುರಿತು ಅವರು ಇದೇ ವೇಳೆ ಚರ್ಚೆ ನಡೆಸಿದರು ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.