ಪಾಟ್ನಾ, ಡಿ 04 (DaijiworldNews/DB): ತಾಯಿಯು ಸಾಯಲಿರುವ ದಿನಾಂಕ ಮತ್ತು ಗಂಟೆ ಸಮೇತ ಶಿಕ್ಷಕನೊಬ್ಬ ಮುಖ್ಯಶಿಕ್ಷಕನಿಗೆ ಲೀವ್ ಲೆಟರ್ ನೀಡಿರುವುದು ಮುಖ್ಯ ಶಿಕ್ಷಕನಿಗೆ ಶಾಕ್ ಆಗಿದೆ. ಇದೀಗ ಈ ಲೆಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶಿಕ್ಷಕನ ರಜೆ ಕಾರಣಕ್ಕೆ ನೆಟ್ಟಿಗರೇ ದಂಗಾಗಿದ್ದಾರೆ.
ಬಿಹಾರ ಮೂಲದ ಅಜಯ್ಕುಮಾರ್ ಎಂಬ ಶಿಕ್ಷಕನೊಬ್ಬನಿಗೆ ಡಿಸೆಂಬರ್ 6 ಮತ್ತು 7ರಂದು ರಜೆ ಬೇಕಿತ್ತು. ಸಾಮಾನ್ಯವಾಗಿ ಸಿಎಲ್ ತೆಗೆದುಕೊಳ್ಳುವುದಕ್ಕೆ ಮೂರು ದಿನ ಮುಂಚಿತವಾಗಿಯೇ ಲೀವ್ ಲೆಟರ್ ನೀಡಬೇಕಾದ್ದರಿಂದ ಈ ಶಿಕ್ಷಕ ಉಪಯೋಗಿಸಿದ ತಂತ್ರ ನೋಡಿ ಸ್ವತಃ ಮುಖ್ಯ ಶಿಕ್ಷಕನಿಗೆ ಶಾಕ್ ಆಗಿದೆ. ಡಿಸೆಂಬರ್ 5ರ ರಾತ್ರಿ 8 ಗಂಟೆಗೆ ನಮ್ಮ ತಾಯಿ ಸಾವನ್ನಪ್ಪಲಿದ್ದು, ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ನನಗೆ 6 ಮತ್ತು 7ರಂದು ರಜೆ ಬೇಕಾಗಿದೆ ಎಂದು ಬರೆದಿದ್ದಾರೆ.
ಸಾಮಾನ್ಯವಾಗಿ ಕುಟುಂಬಿಕರು ಸಾವನ್ನಪ್ಪಿದಾಗ ರಜೆ ಕೇಳುತ್ತಾರೆ. ಆದರೆ ಈ ಶಿಕ್ಷಕ ತಾಯಿ ಸಾವನ್ನಪ್ಪುವುದಕ್ಕೆ ಮೊದಲೇ ಮುಂಗಡವಾಗಿ ಆಕೆಯ ಸಾವಿಗೆ ರಜೆ ಕೇಳಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೊಬ್ಬ ಶಿಕ್ಷಕ ಡಿಸೆಂಬರ್ 4, 5ರಂದು ನನಗೆ ಅನಾರೋಗ್ಯ ಬಾಧಿಸುವುದರಿಂದ ನಾನು ಶಾಲೆಗೆ ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ದಿನಾಂಕಗಳಂದು ನನಗೆ ರಜೆ ಬೇಕೆಂದು ಲೀವ್ ನೋಟ್ ಕೊಟ್ಟಿದ್ದಾನೆ.