ಮುಂಬೈ, ಡಿ 04 (DaijiworldNews/HR): ದೇಶದ ಮೊದಲ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ ಸೇವೆ ಜನವರಿ 14ರಂದು ಮುಂಬೈನಲ್ಲಿ ಆರಂಭಿಸಲಾಗುತ್ತದೆ ಎಂದು ಬೃಹತ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ ಸಂಸ್ಥೆ(ಬೆಸ್ಟ್) ಘೋಷಿಸಿದೆ.
ಅಶೋಕ್ ಲೇಲ್ಯಾಂಡ್ ಈಗಾಗಲೇ ಬಸ್ ಸಿದ್ಧಪಡಿಸಿದ್ದು, ಸ್ವಿಚ್ ಮೊಬಿಲಿಟಿ ಎಂಬ ಹೆಸರಿನ ಈ ಬಸ್ ಅನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ 'ಬೆಸ್ಟ್' ಗೆ ಹಸ್ತಾಂತರಿಸಲಾಗಿದೆ.
ಇನ್ನು ಮೊದಲ ಹಂತದಲ್ಲಿ ಕನಿಷ್ಠ 10 ಡಬಲ್ ಡೆಕ್ಕರ್ ಬಸ್ ಸೇವೆಯನ್ನು ನೀಡಲು ಚಿಂತನೆ ನಡೆಸಲಾಗಿದ್ದು, ಈ ತಿಂಗಳಿನಿಂದಲೇ ಮುಂಬೈನಲ್ಲಿ ವಿದ್ಯುತ್ ಚಾಲಿತ ಪ್ರೀಮಿಯಂ ಸಿಂಗಲ್ ಡೆಕ್ಕರ್ ಬಸ್ ಸೇವೆ ಆರಂಭವಾಗಲಿದೆ.