ಮುಂಬೈ, ಡಿ 03(DaijiworldNews/MS): ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ' ಭವನ' ನಿರ್ಮಾಣಕ್ಕೆ ಮೊದಲು ಜಾಗ ನೀಡುವಂತೆ ರಾಜ್ಯಸಭಾ ಸದಸ್ಯ, ಶಿವಸೇನೆ ವಕ್ತಾರ ಸಂಜಯ ರಾವತ್ ಹೇಳಿದ್ದಾರೆ.
ಸೊಲ್ಲಾಪುರದಲ್ಲಿ ಕನ್ನಡ ಭವನಕ್ಕೆ 10 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ ಬೆನ್ನಲ್ಲೇ ಮುಂಬೈನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಮಹಾರಾಷ್ಟ್ರ ಸಚಿವರು ಹೋಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಸಚಿವರಿಗೆ ಅಲ್ಲಿಗೆ ಹೋಗಲು ಆಗದಿದ್ದರೆ ಹೇಳಲಿ, ನಾವೇ ಬೆಳಗಾವಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವುದಾಗಿ ರಾವತ್ ಸವಾಲು ಹಾಕಿದ್ದಾರೆ.