ನವದೆಹಲಿ, ಡಿ 02 (daijiworldNews/HR): ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮೇಲೆ ನಡೆದ ಸೈಬರ್ ದಾಳಿಯು ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾವನ್ನು ಕದ್ದಿದ್ದಾರೆ ಎಂದು ವರದಿಯಾಗಿದೆ.
ಚೀನಾದ ಹ್ಯಾಕರ್ಗಳು ನಡೆಸಿದ ಶಂಕಿತ ಸೈಬರ್ ದಾಳಿಯು ಒಟ್ಟು ಐದು ಮುಖ್ಯ ಸರ್ವರ್ಗಳನ್ನು ಗುರಿಯಾಗಿಸಿದ್ದು, ಕದ್ದ ಡೇಟಾವನ್ನು ಇಂಟರ್ನೆಟ್ನ ಗುಪ್ತ ಭಾಗವಾದ ಡಾರ್ಕ್ ವೆಬ್ನಲ್ಲಿ ಮಾರಾಟ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಕಳುವಾದ ಏಮ್ಸ್ ಡೇಟಾಕ್ಕಾಗಿ ಡಾರ್ಕ್ ವೆಬ್ನಲ್ಲಿ 1,600 ಕ್ಕೂ ಹೆಚ್ಚು ಹುಡುಕಾಟಗಳನ್ನು ಡೇಟಾ ತೋರಿಸಿದೆ. ಕದ್ದ ಡೇಟಾದಲ್ಲಿ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ವಿವಿಐಪಿಗಳ ವಿವರಗಳಿವೆ ಎನ್ನಲಾಗಿದೆ.