ಮುಂಬೈ, ಡಿ 02 (DaijiworldNews/DB): ಸಾರ್ವಜನಿಕ ಕಾನೂನು ಸುವ್ಯವಸ್ಥೆಯಲ್ಲಿನ ತೊಡಕು ತಡೆ ಮತ್ತು ಶಾಂತಿ ಖಚಿತತೆಗಾಗಿ ವಾಣಿಜ್ಯ ನಗರಿ ಮುಂಬೈಯಲ್ಲಿ ಇಂದಿನಿಂದ ಜನವರಿ 2ರವರೆಗೆ ಪೊಲೀಸರು ಕರ್ಫ್ಯೂ ಜಾರಿಗೊಳಿಸಿದ್ದಾರೆ.
ನಗರದಲ್ಲಿ ಕರ್ಫ್ಯೂ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವುದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ, ಘೋಷಣೆ, ಪ್ರದರ್ಶನ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಡಿಸೆಂಬರ್ 4ರಿಂದ ಜನವರಿ 2ರವರೆಗೆ ಶಸ್ತ್ರಾಸ್ತ್ರಗಳಿಗೂ ನಿಷೇಧ ಹೇರಲಾಗಿದೆ.
ಇನ್ನು ವಿವಾಹ, ಅಂತ್ಯಕ್ರಿಯೆ, ಕಂಪೆನಿ, ಕ್ಲಬ್, ಸಹಕಾರ ಸಂಘಗಳು ದೊಡ್ಡ ಮಟ್ಟದಲ್ಲಿ ಯಾವುದೇ ಸಭೆಗಳನ್ನು ಹಮ್ಮಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಸರ್ಕಾರಿ ಕಚೇರಿ, ಕೋರ್ಟ್, ಸ್ಥಳೀಯಾಡಳಿತ ಕಾರ್ಯಕ್ರಮಗಳಲ್ಲಿ ಐದಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ.
ಶಾಲಾ-ಕಾಲೇಜು, ಇತರ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆ, ಇತರ ಸಾಮಾನ್ಯ ವ್ಯವಹಾರವನ್ನೂ ಈ ಅವಧಿಯಲ್ಲಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ನಿರ್ದೇಶಿಸಿದ್ದಾರೆ.