ನವದೆಹಲಿ, ಡಿ 02 (DaijiworldNews/DB): ಆಲ್ಕೋಹಾಲ್, ಡ್ರಗ್ಸ್, ಶಸ್ತ್ರಾಸ್ತ್ರ, ಗನ್ ಸಂಸ್ಕೃತಿಯನ್ನು ವೈಭವೀಕರಿಸುವ ಯಾವುದೇ ಹಾಡುಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರವು ಎಲ್ಲಾ ಎಫ್ಎಂ ರೇಡಿಯೋ ಚಾನೆಲ್ಗಳಿಗೆ ಎಚ್ಚರಿಕೆ ನೀಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅನುಮತಿ ಒಪ್ಪಂದ ಮತ್ತು ಅನುಮತಿ ಒಪ್ಪಂದದ ವಲಸೆ ಅನುದಾನದಲ್ಲಿ ಸೂಚಿಸಲಾದ ನಿಯಮ ಮತ್ತು ಷರತ್ತುಗಳನ್ನು ಎಲ್ಲಾ ಎಫ್ಎಂ ಚಾನೆಲ್ಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ದಂಡದ ಕ್ರಮ ಅನಿವಾರ್ಯವಾಗಲಿದೆ ಎಂದು ಸೂಚಿಸಲಾಗಿದೆ.
ಆಲ್ಕೋಹಾಲ್, ಡ್ರಗ್ಸ್, ಶಸ್ತ್ರಾಸ್ತ್ರಗಳು, ಗನ್ ಸಂಸ್ಕೃತಿಗಳನ್ನು ವೈಭವೀಕರಿಸುವ ಹಾಡುಗಳನ್ನು ಕೆಲವು ಎಫ್ಎಂ ಚಾನೆಲ್ಗಳು ಪ್ರಸಾರ ಮಾಡುತ್ತಿರುವುದು ಗೊತ್ತಾಗಿದೆ. ಅಂತಹವುಗಳು ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುವುದಲ್ಲದೆ, ಎಐಆರ್ ಪ್ರೋಗ್ರಾಂ ಕೋಡ್ನ್ನು ಕೂಡಾ ಉಲ್ಲಂಘಿಸುತ್ತದೆ. ನಿಯಮ ಉಲ್ಲಂಘನೆಯಾದಲ್ಲಿ ಅನುಮತಿ ಅಮಾನತು ಮಾಡಲು ಮತ್ತು ಪ್ರಸಾರದ ಮೇಲೆ ನಿಷೇಧ ಹೇರುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸೂಚಿಸಲಾಗಿದೆ.