ಬೆಂಗಳೂರು, ಡಿ 01 (DaijiworldNews/DB): ಕೆಜಿಎಫ್ ಸಿನಿಮಾದಲ್ಲಿ ತಾತನ ಪಾತ್ರ ಮಾಡಿದ್ದ ಕೃಷ್ಣಾಜಿ ರಾವ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಸಂಬಂಧಿಕರ ಮನೆಯಲ್ಲಿ ಬುಧವಾರ ತಡರಾತ್ರಿ ಕೃಷ್ಣಾಜಿ ರಾವ್ ಕುಸಿದು ಬಿದ್ದಿದ್ದು, ತತ್ಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ತಾತನಾಗಿ ಕಾಣಿಸಿಕೊಂಡಿದ್ದ ಕೃಷ್ಣಾಜಿ ರಾವ್ ಅವರು ಬಳಿಕ ವಿವಿಧ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ‘ನ್ಯಾನೊ ನಾರಾಯಣಪ್ಪ’ ಎಂಬ ಇತ್ತೀಚೆಗೆ ಸೆಟ್ಟೇರಿದ್ದ ಚಿತ್ರಕ್ಕೆ ಅವರೇ ನಾಯಕನ ಪಾತ್ರ ಮಾಡಿದ್ದಾರೆ.