ನವದೆಹಲಿ, ಡಿ 01 (DaijiworldNews/HR): ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ರೇಂಜರ್ಗಳ ಕೈಗೆ ಸಿಕ್ಕಿಬಿದ್ದ ಬಿಎಸ್ಎಫ್ ಕಾನ್ಸ್ಟೆಬಲ್ನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಎಂಟು ಬಿಎಸ್ಎಫ್ ಜವಾನರ ತಂಡವು ಪಂಜಾಬಿನ ಫಾಜಿಲ್ಕಾ ಜಿಲ್ಲೆಯ ಅಬೋಹರ್ ಗಡಿಯ ಬಳಿ ನಿಯಂತ್ರಣ ರೇಖೆಯ ಉದ್ದಕ್ಕೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿತತು.
ಇನ್ನು ಮುಂಜಾನೆ ಭಾರೀ ಮಂಜು ಕವಿದಿದ್ದರಿಂದ ಬಿಎಸ್ಎಫ್ ಕಾನ್ಸ್ಟೆಬಲ್ ಆಕಸ್ಮಿಕವಾಗಿ ಗಡಿ ದಾಟಿದ್ದಾರೆ ಎಂದು ತಿಳಿದು ಬಂದಿದೆ.