ಘಾಜಿಯಾಬಾದ್(ಉತ್ತರ ಪ್ರದೇಶ), ಡಿ 01 (DaijiworldNews/DB): ಮೂವರು ಬಾಲಕಿಯರು 20 ನಿಮಿಷಕ್ಕೂ ಹೆಚ್ಚು ಕಾಲ ಲಿಫ್ಟ್ನೊಳಗಡೆ ಬಾಕಿಯಾದ ಘಟನೆ ಗಾಜಿಯಾಬಾದ್ನ ಸೊಸೈಟಿಯೊಂದರಲ್ಲಿ ನಡೆದಿದೆ.
ಲಿಫ್ಟ್ ಏರಿರುವ ಬಾಲಕಿಯರು ಲಿಫ್ಟ್ನೊಳಗಡೆಯೇ ಸಿಲುಕಿಕೊಂಡಿದ್ದಾರೆ. ಸಹಾಯಕ್ಕಾಗಿ ಬಲವಂತದಿಂದ ಬಾಗಿಲು ತೆರೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸಹಾಯಕ್ಕಾಗಿ ಕರೆ ಮಾಡಲು ಲಿಫ್ಟ್ನಲ್ಲಿರುವ ವಿವಿಧ ಬಟನ್ ಒತ್ತಿಯೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಳುತ್ತಾ ನಿಂತುಕೊಂಡಿದ್ದರು. ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಬಾಲಕಿಯರು ಲಿಫ್ಟ್ನೊಳಗೆ ಬಾಕಿಯಾಗಿದ್ದು, ಚಡಪಡಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇನ್ನು ಘಟನೆ ಸಂಬಂಧ ಕಟ್ಟಡದ ಬಿಲ್ಡರ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ಲಿಫ್ಟ್ಗಳಲ್ಲಿ ಹಲವು ಬಾರಿ ಜನ ಇದೇ ರೀತಿ ಸಿಲುಕಿಕೊಂಡು ದೂರು ನೀಡಿದರೆ ಯಾವುದೇ ಸ್ಪಂದನೆ ಇಲ್ಲದಾಗಿದೆ. ಮಕ್ಕಳು ಲಿಫ್ಟ್ ಬಳಕೆಗೆ ಹೆದರುತ್ತಿದ್ದಾರೆ. ಮಕ್ಕಳಿಗೆ, ಹಿರಿಯ ನಾಗರಿಕರಿಗೆ ತುಂಬಾ ಅಪಾಯಕಾರಿಯಾಗಿದೆ ಎಂದು 8 ವರ್ಷದ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.