ಗುಜರಾತ್, ಡಿ 01 (DaijiworldNews/HR): ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ತಮ್ಮ ನಿವಾಸದಿಂದ ಗ್ಯಾಸ್ ಸಿಲಿಂಡರ್ ಅನ್ನು ಸೈಕಲ್ ಹಿಂದೆ ಕಟ್ಟಿಕೊಂಡು ವಿಭಿನ್ನ ರೀತಿಯಲ್ಲಿ ಮತದಾನದ ಹಕ್ಕು ಚಲಾಯಿಸಲು ಮತಗಟ್ಟೆಗೆ ಹೋಗಿರುವ ಘಟನೆ ಗುಜರಾತ್ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ನಡೆದಿದೆ.
ಪರೇಶ್ ಧನಾನಿ ಗ್ಯಾಸ್ ಸಿಲಿಂಡರ್ ಅನ್ನು ಕಟ್ಟಿಕೊಂಡು ಸೈಕಲ್ನಲ್ಲಿ ಸವಾರಿ ಮಾಡಿಕೊಂಡು ಬಂದಿದ್ದು, ಅದರ ಮೇಲೆ ಇಂದಿನ ಗ್ಯಾಸ್ ಬೆಲೆಯ ಜೊತೆಗೆ 2014ರ ಗ್ಯಾಸ್ ಬೆಲೆಗೆ ಹೋಲಿಸುವ ಫಲಕ ಅಂಟಿಸಲಾಗಿತ್ತು.
ಇನ್ನು ಗ್ಯಾಸ್ ಸಿಲಿಂಡರ್ ದರದ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿ ಜನರ ಗಮನ ಸೆಳೆದಿದೆ.