ಮುಂಬೈ, ಡಿ 01 (DaijiworldNews/HR): ದಕ್ಷಿಣ ಕೊರಿಯಾದ ಯೂಟ್ಯೂಬರ್ ಯುವತಿಯೊಬ್ಬರಿಗೆ ಮುಂಬೈನ ರಸ್ತೆಯಲ್ಲಿ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಆದರೆ ಘಟನೆಯ ಕುರಿತಾಗಿ ನಮ್ಮ ಗಮನಕ್ಕೆ ತಂದಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಾಗ ದಕ್ಷಿಣ ಕೊರಿಯಾದ ಯುವತಿ ಉಪನಗರ ಖಾರ್ ಪ್ರದೇಶದಲ್ಲಿ ಲೈವ್ಸ್ಟ್ರೀಮ್ ಮಾಡುತ್ತಿದ್ದಳು ಎಂದು ವೀಡಿಯೊವನ್ನು ಹಂಚಿಕೊಂಡವರು ಹೇಳಿದ್ದಾರೆ.
ಇನ್ನು ಯುವಕನೊಬ್ಬ ಯುವತಿಯ ಸಮೀಪಕ್ಕೆ ಬಂದು ಆಕೆಯ ಕೈ ಹಿಡಿದು ಎಳೆದಾಡಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ತನಿಖೆ ಪ್ರಾರಂಭವಾಗಿದ್ದು, ಯುವತಿಗೆ ಕಿರುಕುಳ ನೀಡಿದ ಯುವಕನನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.