ನವದೆಹಲಿ, ನ 30 (DaijiworldNews/DB): ಡಿಜಿಟಲ್ ಆರ್ಥಿಕತೆ ಕ್ಷೇತ್ರದಲ್ಲಿ ಸುಮಾರು 90 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆ 1 ಕೋಟಿ ದಾಟುವ ಗುರಿ ಹೊಂದಲಾಗಿದೆ ಎಂದು ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಡಿಜಿಟಲ್ ಆರ್ಥಿಕತೆಯು ಔದ್ಯೋಗಿಕ ಅವಕಾಶಗಳನ್ನು ಸೃಷ್ಟಿಸುವಲ್ಲಿ ಕಾರಣವಾಗುತ್ತಿದೆ. ಎಲೆಕ್ಟ್ರಾನಿಕ್ ಉತ್ಪಾದನೆ, ಐಟಿ, ಐಟಿ ಸೇವೆಗಳು ಮತ್ತು ನವೋದ್ಯಮಗಳು ಡಿಜಿಟಲ್ ಆರ್ಥಿಕತೆಯ ಮೂರು ಆಧಾರ ಸ್ಥಂಭಗಳು ಎಂದರು.
ಸುಮಾರು 90 ಲಕ್ಷ ಉದ್ಯೋಗಗಳನ್ನು ಜನ ಈ ಕ್ಷೇತ್ರದಲ್ಲಿ ಈಗಾಗಲೇ ಕಂಡು ಕೊಂಡಿದ್ದಾರೆ. ಮುಂದೆ ಈ ಸಂಖ್ಯೆ 1 ಕೋಟಿ ದಾಟಲಿದೆ ಎಂದವರು ತಿಳಿಸಿದರು.