ಕಾರವಾರ, ನ 29 (daijiworldews/HR): ಉತ್ತರ ಕನ್ನಡದ ಮೀನುಗಾರರ ಬೇಡಿಕೆಯಾಗಿದ್ದ ಹೂಳೆತ್ತುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮೀನುಗಾರಿಕೆ ನಡೆಸಲು ತೊಂದರೆ ಅನುಭವಿಸುತ್ತಿರುವ ಮೀನುಗಾರರ ಬಹುದಿನಗಳ ಬೇಡಿಕೆಯಾಗಿರುವ ಹೂಳೆತ್ತುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದ್ದು, ತದಡಿ, ಭಟ್ಕಳ, ಹೊನ್ನಾವರ, ಕಾರವಾರ ಮತ್ತು ಅಮದಹಳ್ಳಿಯಲ್ಲಿ ಹೂಳೆತ್ತುವ ಕಾರ್ಯ ಆರಂಭವಾಗಲಿದೆ ಎಂದರು.
ಇನ್ನು ದೋಣಿ ಅವಘಡಗಳಿಗೆ ಕಾರಣವಾಗುವ ಮರಳು ಸಂಗ್ರಹವಾಗಿರುವ ಐದು ಮೀನುಗಾರಿಕಾ ಬಂದರುಗಳು ಮತ್ತು ಅಳಿವೆಗಳ ಹೂಳೆತ್ತುವ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಡಳಿತ ತಿಳಿಸಿದೆ.