ನ. 29 (daijiworldews/HR): ಬರೋಬ್ಬರಿ ಒಂಬತ್ತು ಗಂಟೆ ವಿಳಂಬವಾಗಿ ಬಂದ ರೈಲಿಗೆ ನಿಲ್ದಾಣದಲ್ಲಿ ವಿಚಿತ್ರ ರೀತಿಯ ಪ್ರತಿಕ್ರಿಯೆ ಸಿಕ್ಕಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಯಾಣಿಕರ ರೈಲೊಂದು ತುರ್ತು ಕಾರಣದಿಂದ ಬರೋಬ್ಬರಿ ಒಂಬತ್ತು ಗಂಟೆ ತಡವಾಗಿ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಅಲ್ಲಿದ್ದ ಪ್ರಯಾಣಿಕರು ಕೋಪಗೊಂಡು ರೈಲು ಪ್ಲಾಟ್ ಫಾರಂ ಪ್ರವೇಶಿಸುತ್ತಿದ್ದಂತೆ ಪ್ರಯಾಣಿಕರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಕುಣಿದು ಸಂತೋಷದಿಂದ ಬರಮಾಡಿಕೊಂಡಿದ್ದು ಇದರ ವಿಡಿಯೋ ಹಾರ್ದಿಕ್ ಬೋಂತು ಎಂಬ ವ್ಯಕ್ತಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಅನೇಕ ಮಂದಿ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾದು ನಿಂತಿರುವ ಚಿತ್ರಣ ವಿಡಿಯೋದಲ್ಲಿ ರೈಲ್ವೆ ಅಧಿಕಾರಿಗಳು ರೈಲು ಆಗಮಿಸುವ ಸೂಚನೆ ನೀಡಿದ್ದು, ಕೊನೆಗೂ ರೈಲಿನ ಬೆಳಕು ಕಾಣುತ್ತಿದ್ದಂತೆ ಪ್ರಯಾಣಿಕರು ಚಪ್ಪಾಳೆ ಬಡಿದು ಅಂತೂ ರೈಲು ಕೊನೆಗೂ ಬಂತಲ್ಲ ಎಂಬ ಸಂಭ್ರಮದಿಂದ ಕುಣಿದು, ರೈಲಿಗೆ ತಲೆಬಾಗಿ ಸ್ವಾಗತಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.