ಚಂಡೀಗಢ, ನ 29 (DaijiworldNews/DB): ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಡ್ರೋನ್ವೊಂದನ್ನು ಬಿಎಸ್ಸೆಫ್ ಸಿಬಂದಿ ಇಂದು ಮುಂಜಾನೆ ಹೊಡೆದುರುಳಿಸಿದ್ದಾರೆ.
ಭಾರತದ ಗಡಿ ಭದ್ರತಾ ಪಡೆಯು ಪಾಕ್ ಭಯೋತ್ಪಾದನಾ ಚಟುವಟಿಕೆಗಳನ್ನು ನಿಯಂತ್ರಿಸಲು ನಿರಂತರವಾಗಿ ನಿಗಾ ವಹಿಸಿದೆ. ಎರಡು ದಿನದ ಹಿಂದಷ್ಟೇ ಭಾರತದಲ್ಲಿ ಡ್ರೋನ್ ಹಾರಿಸಲು ಪ್ರಯತ್ನಿಸಿದ್ದ ಪಾಕ್ನ ಚಟುವಟಿಕೆಯನ್ನು ಬಿಎಸ್ಸೆಫ್ ವಿಫಲಗೊಳಿಸಿ ಡ್ರೋನ್ ಹೊಡೆದು ಹಾಕಿತ್ತು. ಇದೀಗ ಇಂದು ಮುಂಜಾನೆ ಪಾಕಿಸ್ತಾನ ತನ್ನ ಮೊಂಡುತನ್ನು ಮುಂದುವರಿಸಿದ್ದು, ಭಾರತಕ್ಕೆ ಪ್ರವೇಶಿಲು ಡ್ರೋನ್ ಹಾರಿಸಿತ್ತು. ಆದರೆ ಈ ಡ್ರೋನ್ನ್ನು ಬಿಎಸೆಫ್ ಹೊಡೆದುರುಳಿಸಿದೆ.
ಚಹರ್ಪುರ್ ಗ್ರಾಮದ ಬಳಿ ಈ ಡ್ರೋನ್ ಭಾರತಕ್ಕೆ ನುಸುಳುತ್ತಿದ್ದ ವೇಳೆ ಗಮನಿಸಿದ ಸಿಬಂದಿ ಡ್ರೋನ್ ಮೇಲೆ ಗುಂಡು ಹಾರಿಸಿ ನೆಲಕ್ಕುರುಳಿಸಿದರು. ಡ್ರೋನ್ ಶಬ್ದ ಕೇಳಿದಾಕ್ಷಣ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ನೆಲಕ್ಕುರುಳಿದ ಡ್ರೋನ್ನ್ನು ಕೂಡಲೇ ಸಿಬಂದಿ ಸುತ್ತುವರಿದು, ಸಂಬಂಧಪಟ್ಟ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.