ಪಣಜಿ, ನ. 29 (daijiworldews/HR): 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು ಅಸಭ್ಯ ಚಲನಚಿತ್ರವಾಗಿದೆ ಎಂದು ಗೋವಾದಲ್ಲಿ ನಡೆದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು 'ಪ್ರಚಾರ' ಮತ್ತು 'ಅಸಭ್ಯ ಚಲನಚಿತ್ರ' ಎಂದು ಕರೆಡಿದ್ದಾರೆ, ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲ ಇದೊಂದು ಪ್ರಚಾರಕ ಚಲನಚಿತ್ರದಂತೆ ನಮಗೆ ತೋರುತ್ತಿದೆ ಎಂದಿದ್ದಾರೆ.
ಇನ್ನು ಈ ಭಾವನೆಗಳನ್ನು ವೇದಿಕೆಯಲ್ಲಿ ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕೊನೆಯ ದಿನ ಪ್ರದರ್ಶನಗೊಂಡ ಚಿತ್ರವನ್ನು ಕಂಡು ನಾವು ವಿಚಲಿತರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಈ ಸಿನಿಮಾ ದೇಶದಾದ್ಯಂತ ಅನೇಕ ಮಂದಿ ಹೊಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಚಿತ್ರವನ್ನು ಹೊಗಳಿದ್ದಾರೆ.