ನವದೆಹಲಿ, ನ 28 (DaijiworldNews/MS): ನಗದು, ಆಭರಣ ಹೀಗೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಘಟನೆಗಳು ಸಾಕಷ್ಟು ಸಾಮಾನ್ಯವಾಗಿದೆ, ಆದರೆ ಇಲ್ಲೊಬ್ಬ ಭೂಪ ಟೂತ್ಪೇಸ್ಟ್ ನ್ನು ಬಿಡದೆ ಕಳವು ಮಾಡಿದ್ದು, ಸದ್ಯ ಪೊಲೀಸರ ಅಥಿತಿಯಾಗಿದ್ದೆ.
ನವೆಂಬರ್ 22 ರಂದು, ಉದ್ಯಮಿ ಕುನ್ವರ್ ಪಾಲ್ ಸಿಂಗ್ ಅವರು ಲಾಹೋರಿ ಗೇಟ್ ಪೊಲೀಸರಿಗೆ ತಮ್ಮ ಲಾಹೋರಿ ಗೇಟ್ ಪ್ರದೇಶದ ಗೋದಾಮಿನಲ್ಲಿ ಟೂತ್ಪೇಸ್ಟ್ ತುಂಬಿದ 215 ಬಾಕ್ಸ್ಗಳನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ವೇಳೆ ಗೋದಾಮಿನ ಉಸ್ತುವಾರಿ ಉದಯ್ ಕುಮಾರ್ ಅಲಿಯಾಸ್ ಸಂತೋಷ್ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಆರೋಪಿಯು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯವನೆಂದು ತನಿಖೆಯಲ್ಲಿ ತಿಳಿದಿದ್ದು ,ದೆಹಲಿ ಪೊಲೀಸರ ತಂಡವು ಬಹ್ರೈಚ್ನ ಜರ್ವಾಲ್ ರೋಡ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಜಂಟಿ ಕಾರ್ಯಾಚರಣೆ ನಡೆಸಿ, ನವೆಂಬರ್ 25 ರಂದು ಸಂಜೆ ಖಾಸೇಪುರ್ ಗ್ರಾಮದ ಆರೋಪಿಯ ಮನೆ ಮೇಲೆ ದಾಳಿ ನಡೆಸಿದೆ. ಈ ವೇಳೆ 11 ಲಕ್ಷ ರೂಪಾಯಿ ಮೌಲ್ಯದ 215 ಬಾಕ್ಸ್ ಟೂತ್ಪೇಸ್ಟ್ ಅನ್ನು ಕದ್ದಿದ್ದ ವ್ಯಕ್ತಿಯನ್ನು ಮಾಲು ಸಮೇತ ಬಂಧಿಸಿದೆ.