ಶ್ರೀನಗರ, ನ 28 (DaijiworldNews/HR): ಸರ್ಕಾರಿ ನಿವಾಸ 24 ಗಂಟೆಯೊಳಗೆ ಖಾಲಿ ಮಾಡಿ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಅನಂತ್ನಾಗ್ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದಕ್ಷಿಣ ಕಾಶ್ಮೀರದ ಅನಂತ್ನಾಗ್ನಲ್ಲಿ ಸರ್ಕಾರಿ ಬಂಗಲೆಯಲ್ಲಿ ಮೆಹಬೂಬಾ ಮುಫ್ತಿ ವಾಸವಿದ್ದು, ಇದನ್ನು ಖಾಲಿ ಮಾಡಬೇಕು ಎಂದು ಅವರಿಗೆ ಒಂದು ತಿಂಗಳ ಹಿಂದೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಬಂಗಲೆ ಖಾಲಿ ಮಾಡದ ಕಾರಣ ಇದೀಗ ಮತ್ತೆ ನೋಟಿಸ್ ಜಾರಿ ಮಾಡಲಾಗಿದೆ.
ಇನ್ನು 24 ಗಂಟೆಯೊಳಗೆ ಬಂಗಲೆ ಖಾಲಿ ಮಾಡಲು ನಿಮಗೆ ನಿರ್ದೇಶಿಸಲಾಗಿದ್ದು, ಇದು ತಪ್ಪಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ಹೇಳಲಾಗಿದೆ.