ನವದೆಹಲಿ, ನ 28 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಗುಜರಾತ್ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್)ದ ಮಾಜಿ ಐಐಟಿ ವಿದ್ಯಾರ್ಥಿಯನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಬಂಧಿತ ಯುವಕನನ್ನು ಅಮಾನ್ ಸಕ್ಸೇನಾ(28 )ಎಂದು ಗುರುತಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಕ್ಸೇನಾ ಬೆದರಿಕೆಯೊಡ್ಡಿ ಇ-ಮೇಲ್ ಮಾಡಿದ್ದು, ಈ ಆರೋಪದಲ್ಲಿ ಉತ್ತರಪ್ರದೇಶದ ಬುದೌನ್ ಜಿಲ್ಲೆಯಲ್ಲಿರುವ ತಂದೆಯ ಮನೆಯಲ್ಲಿದ್ದ ಸಕ್ಸೇನಾನನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು.
ಇನ್ನು ಪ್ರಧಾನಿ ಮೋದಿ ಅವರಿಗೆ ಇ-ಮೇಲ್ ಮೂಲಕ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಸಕ್ಸೇನಾ ಹಾಗೂ ಗುಜರಾತ್ ಮೂಲದ ಮಹಿಳೆ ಮತ್ತು ಆಕೆಯ ದೆಹಲಿ ಮೂಲದ ಗೆಳೆಯನ ವಿರುದ್ಧ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿ ನೀಡಿದ್ದಾರೆ.