ಅಹಮದಾಬಾದ್, ನ 27 (DaijiworldNews/DB): ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯ ಗಳಿಸಲಿದೆ. ಗುಜರಾತ್ನಲ್ಲಿ ನಾವು ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ.
ಸೂರತ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಗುಜರಾತ್ನಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮುಂದಿನ ಜನವರಿ 31ರ ಬಳಿಕ ಜಾರಿ ಮಾಡಲಾಗುವುದು. ನಮ್ಮ ಪಕ್ಷವನ್ನು ಬೆಂಬಲಿಸಲು ಸರ್ಕಾರಿ ನೌಕರರು ಮನಸ್ಸು ಮಾಡಬೇಕು ಎಂದರು.
ಈಗಾಗಲೇ ಪಂಜಾಬ್ ಮತ್ತು ದೆಹಲಿಯಲ್ಲಿ ಸರ್ಕಾರ ರಚಿಸುವ ಬಗ್ಗೆ ನಾನು ಹೇಳಿದ್ದೆ. ಅದು ಅದೇ ರೀತಿ ಆಗಿದೆ. ಗುಜರಾತ್ನಲ್ಲಿಯೂ 27 ವರ್ಷಗಳ ದುರಾಡಳಿತ ಕೊನೆಗೊಂಡು ಹೊಸ ಶಕೆ ಆರಂಭವಾಗಲಿದೆ. ಬಿಜೆಪಿ ಆಡಳಿತದ ಬಗ್ಗೆ ಜನರಲ್ಲಿ ಆತಂಕ ಕಾಡುತ್ತಿರುವುದು ಸ್ಪಷ್ಟ ಎಂದು ತಿಳಿಸಿದರು.
ಇನ್ನು ತಮ್ಮ ಭವಿಷ್ಯವಾಣಿಯನ್ನು ಪತ್ರದ ಮೇಲೆ ಬರೆದ ಕೇಜ್ರೀವಾಲ್ ಅದನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.