ನವದೆಹಲಿ, ನ 27 (DaijiworldNews/HR): 2023-24ರ ಕೇಂದ್ರ ಬಜೆಟ್ಗೆ ಸರ್ಕಾರವು ನಾಗರಿಕರಿಂದ ಅವರ ಆಲೋಚನೆಗಳು ಮತ್ತು ಸಲಹೆಗಳನ್ನು ಈ ಬಾರಿ ಆಹ್ವಾನಿಸಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 'ಮೈ ಗವ್' ವೇದಿಕೆಯಿಂದ ಪತ್ರಿಕಾ ಪ್ರಕಟಣೆಯನ್ನು ಟ್ವೀಟ್ ಮಾಡಿ, ಜನರಿಂದ ಮುಂದಿನ ವರ್ಷ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್ಗೆ ಸಲಹೆಗಳನ್ನು ಆಹ್ವಾನಿಸಿದ್ದಾರೆ.
ಇನ್ನು '2023-2024ರ ಕೇಂದ್ರ ಬಜೆಟ್ಗೆ ಐಡಿಯಾಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗುತ್ತಿದೆ | https://MyGov.in ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.