ನವದೆಹಲಿ, ನ 26 (DaijiworldNews/HR): ಭಯೋತ್ಪಾದಕರು ಹೂಡಿದ್ದ ಎರಡು ಐಇಡಿಗಳನ್ನ ಸಶಸ್ತ್ರ ಪಡೆಗಳು ಶನಿವಾರ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಫ್ರಿಸಾಲ್ ಪ್ರದೇಶದಲ್ಲಿ ನಡೆದಿದೆ.
ಈ ಕುರಿತು ಟ್ವೀಟ್ ಮಾಡಿರುವ ಕುಲ್ಗಾಮ್ ಪೊಲೀಸರು, ಕುಲ್ಗಾಮ್ ಜಿಲ್ಲೆಯ ಫ್ರಿಸಾಲ್ ಪ್ರದೇಶದಲ್ಲಿ ಭಯೋತ್ಪಾದಕರು ನೆಟ್ಟಿದ್ದ 02 ಐಇಡಿಗಳನ್ನ ಪತ್ತೆಹಚ್ಚಿದ್ದು, ಅವುಗಳನ್ನ ನಿಷ್ಕ್ರಿಯಗೊಳಿಸುವ ಮೂಲಕ ದೊಡ್ಡ ದುರಂತವನ್ನ ತಪ್ಪಿಸಿದ್ದಾರೆ. ಪ್ರದೇಶವನ್ನ ಸುತ್ತುವರೆದಿದ್ದು, ಶೋಧ ಮುಂದುವರೆದಿದೆ ಎಂದು ತಿಳಿಸಿದ್ದಾರೆ.