ನವದೆಹಲಿ, ನ 25 (DaijiworldNews/DB): 2025ರ ವೇಳೆಗೆ ಭಾರತದಾದ್ಯಂತ 475 ವಂದೇ ಭಾರತ್ ರೈಲುಗಳು ಓಡಾಡಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳಲ್ಲಿ ವಂದೇ ಭಾರತ್ ರೈಲುಗಳ ಓಡಾಟ ಹೆಚ್ಚಲಿದೆ. 475 ರೈಲುಗಳ ಉತ್ಪಾದನೆ ಗುರಿ ಭಾರತೀಯ ರೈಲ್ವೆ ಇಲಾಖೆ ಮುಂದಿದೆ ಎಂದರು.
ಬಳಕೆದಾರರಿಗೆ ವೇಗದ ಪ್ರಯಾಣ ಕಲ್ಪಿಸುವ ಉದ್ದೇಶದಿಂದ ಒಂದೆರಡು ಸೆಮಿ ಹೈ ಸ್ಪೀಡ್ ರೈಲುಗಳ ಸಂಚಾರವೂ ಈಗಾಗಲೇ ಆರಂಭವಾಗಿದೆ. ಇನ್ನು 2026ರ ವೇಳೆಗೆ ಬುಲೆಟ್ ರೈಲುಗಳು ಕೂಡಾ ದೇಶದಲ್ಲಿ ಪೂರ್ಣ ಪ್ರಮಾಣದ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.
138 ರೈಲು ನಿಲ್ದಾಣಗಳ ಮರು ಅಭಿವೃದ್ದಿ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ. ಈ ಪೈಕಿ 57ನಿಲ್ದಾಣಗಳ ವಿನ್ಯಾಸ ಅಂತಿಮಗೊಂಡಿದೆ ಎಂದರು.