ಅಹಮದಾಬಾದ್, ನ 25(DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ನ ಬಾವ್ಲಾ ಭೇಟಿಯ ವೇಳೆ ಡ್ರೋನ್ ಬಳಸಿ ವಿಡಿಯೋ ರೆಕಾರ್ಡ್ ಮಾಡಿದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತರನ್ನು ನಿಕುಲ್ ರಮೇಶ್ಭಾಯ್ ಪರ್ಮಾರ್, ರಾಕೇಶ್ ಕಲುಭಾಯ್ ಭರ್ವಾಡ್ ಮತ್ತು ರಾಜೇಶ್ಕುಮಾರ್ ಮಂಗೀಲಾಲ್ ಪ್ರಜಾಪತಿ ಎಂದು ಗುರುತಿಸಲಾಗಿದೆ.
'ನೋ ಡ್ರೋನ್ ಫ್ಲೈ ಝೋನ್' ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿರುವ ಅಹಮದಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಡ್ರೋನ್ ಅನ್ನು ಎನ್ಎಸ್ಜಿ ಭದ್ರತಾ ಪಡೆಗಳು ಹೊಡೆದು ಉರುಳಿಸಿದ್ದಾರೆ ಎಂದು ತಿಳಿದು ಬಂದಿದೆ.