ಬೆಂಗಳೂರು, ನ 24 (DaijiworldNews/HR): ಉಪೇಂದ್ರ ಅವರ ಆರೋಗ್ಯದ ಕುರಿತು ಊಹಾಪೋಹಗಳು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಇದೀಗ ಗೊಂದಲದ ಬಳಿಕ ಉಪೇಂದ್ರ ಅವರೇ ವಿಡಿಯೋ ಬಿಡುಗಡೆ ಮಾಡಿದ್ದು ನಾನು ಆರೋಗ್ಯವಾಗಿದ್ದು ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಉಪೇಂದ್ರ ಅವರು ಅನಾರೋಗ್ಯಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ಸುದ್ದಿ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.
ಇನ್ನು ನಾನು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿದ್ದೇವೆ. ನಮ್ಮ ಚಿತ್ರ ತಂಡದ ಎಲ್ಲರೂ ಇದ್ದಾರೆ. ನಾನು ಆರಾಮಾಗಿದ್ದೇನೆ. ಸ್ವಲ್ಪ ಧೂಳು ಮತ್ತು ಹೊಗೆಯ ವಾತಾವರಣವಿತ್ತು. ಸ್ವಲ್ಪ ಕೆಮ್ಮಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.