ಮುಂಬೈ, ನ 24 (DaijiworldNews/HR): ಬಾಲಿವುಡ್ ನಟ ಅನ್ನು ಕಪೂರ್ ಗೆ ಕರೆ ಮಾಡಿ ಕೆವೈಸಿ ವಿವರಗಳನ್ನು ಪ್ರಮುಖ ಬ್ಯಾಂಕಿನೊಂದಿಗೆ ನವೀಕರಿಸುವುದಾಗಿ ಹೇಳಿ 4.36 ಲಕ್ಷ ರೂ. ವಂಚಿಸಿದ್ದ ಸೈಬರ್ ವಂಚಕನನ್ನು ಬಂಧಿಸಿರುವ ಘಟನೆ ನಡೆದಿದೆ.
ಬಿಹಾರದ ದರ್ಭಾಂಗ ಮೂಲದ ಆಶಿಶ್ ಪಾಸ್ವಾನ್(24) ಎಂಬಾತನನ್ನು ಉಪನಗರ ಅಂಧೇರಿಯಲ್ಲಿ ಬಂಧಿಸಲಾಗಿದೆ.
ಈ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದ ಜನರಿಗೆ ಸಹಾಯ ಮಾಡುವ ಮೂಲಕ ಪಾಸ್ವಾನ್ ಕಮಿಷನ್ ಗಳಿಸುತ್ತಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ವಿಶೇಷ ತಂಡವು ತಾಂತ್ರಿಕ ಸಾಕ್ಷ್ಯಗಳು, ಆತನ ಮೊಬೈಲ್ ಫೋನ್ ಸಂಖ್ಯೆ ಮತ್ತು ಆನ್ಲೈನ್ ವಹಿವಾಟಿನ ವಿವರಗಳ ಮೂಲಕ ಪಾಸ್ವಾನ್ನನ್ನು ಗುರುತಿಸಿದೆ.