ಪಾಟ್ನಾ, ನ 23 (DaijiworldNews/DB): ಪೆಟ್ರೋಲ್ ಟ್ಯಾಂಕರ್ ಸ್ಪೋಟಗೊಂಡು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವೈಶಾಲಿ ಜಿಲ್ಲೆಯ ಗೊರೌಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಹಾಜಿಪುರ-ಮುಜಾಫರ್ಪುರ ಎನ್ಎಚ್ 22ರಲ್ಲಿ ಪೆಟ್ರೋಲ್ ಟ್ಯಾಂಕರ್ನಲ್ಲಿ ವೆಲ್ಟಿಂಗ್ ಮಾಡುವಾಗ ಘಟನೆ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಟ್ಯಾಂಕರ್ ಸುಮಾರು 10 ಅಡಿ ಎತ್ತರಕ್ಕೆ ಹಾರಿದೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದ ತತ್ಕ್ಷಣ ಗೊರೌಲ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಅಸುನೀಗಿದರೆ, ಹಲವರು ಗಾಯಗೊಂಡಿದ್ದಾರೆ.
ಸ್ಪೋಟದಿಂದ ಪರಿಸರದಲ್ಲಿ ಭಾರೀ ಪ್ರಮಾಣದ ಶಬ್ದವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಸ್ಪೋಟದ ತೀವ್ರತೆಗೆ ಮೃತಪಟ್ಟ ವೆಲ್ಡಿಂಗ್ ಅಗಡಿಯ ವಕೀಲ್ ಸಾಹ್ನಿ, ಟ್ಯಾಂಕರ್ ಚಾಲಕ ಮತ್ತು ಸಹಾಯಕನ ದೇಹಗಳು ಛಿದ್ರಗೊಂಡಿವೆ ಎಂದು ವರದಿಯಾಗಿದೆ. ಘಟನೆ ವೇಳೆ ಟ್ಯಾಂಕರ್ನಲ್ಲಿ ಪೆಟ್ರೋಲ್ ಇಲ್ಲದ ಕಾರಣ ಸಂಭಾವ್ಯ ಭಾರೀ ಅನಾಹುತ ತಪ್ಪಿದಂತಾಗಿದೆ.