ನವದೆಹಲಿ, ನ 22 (DaijiworldNews/HR): ಬ್ಯೂಟಿ ಇ-ರಿಟೇಲರ್ ನೈಕಾದ ಮಾಲೀಕ ಎಫ್ಎಸ್ಎನ್ ಇ-ಕಾಮರ್ಸ್ ವೆಂಚರ್ಸ್ ಲಿಮಿಟೆಡ್ ತನ್ನ ಮುಖ್ಯ ಹಣಕಾಸು ಅಧಿಕಾರಿ ಅರವಿಂದ್ ಅಗರ್ವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಘೋಷಿಸಿದೆ.
ಅಗರ್ವಾಲ್ ನವೆಂಬರ್ 25 ರಂದು ಕಂಪನಿಯನ್ನ ತೊರೆಯಲಿದ್ದು, ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ನೈಕಾ ಸ್ಟಾಕ್ ಎಕ್ಸ್ಚೇಂಜ್ಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಡಿಜಿಟಲ್ ಆರ್ಥಿಕತೆ ಮತ್ತು ನವೋದ್ಯಮ ಕ್ಷೇತ್ರದಲ್ಲಿ ಇತರ ಅವಕಾಶಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.