ಕನಕಗಿರಿ, ನ 22 (DaijiworldNews/DB): ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಬೆಳಗ್ಗಿನ ಉಪಾಹಾರದಲ್ಲಿ ಹುಳ ಬಿದ್ದು ಹಲವು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಕನಕಗಿರಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 1 ನೇ ವಾರ್ಡ್ ನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಘಟನೆ ಸಂಭವಿಸಿದೆ. ಅಸ್ವಸ್ಥ ವಿದ್ಯಾರ್ಥಿನಿಯರನ್ನು ಸ್ಥಳೀಯ ಸಮುದಾಯ ಅರೋಗ್ಯ ಕೆಂದ್ರಕ್ಕೆ ದಾಖಲಿಸಲಾಗಿದೆ. ಇನ್ನು ಕಳೆದ ಎರಡು-ಮೂರು ದಿನಗಳಿಂದಲೇ ಆಹಾರದಲ್ಲಿ ಹುಳುಗಳು ಬೀಳುತ್ತಿದ್ದವು. ಇದಕ್ಕಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಇಂದು ಬೆಳಗ್ಗೆ ಕೂಡಾ ಉಪಾಹಾರದಲ್ಲಿ ಹುಳ ಬಿದ್ದಿದ್ದು, ಅದನ್ನು ಸೇವಿಸಿದ ವಿದ್ಯಾರ್ಥಿನಿಯರು ಅಸ್ವಸ್ಥರಾದರೆಂದು ತಿಳಿದು ಬಂದಿದೆ.
ಪ್ರತಿದಿನ ಅಡುಗೆಯ ಕುರಿತಂತೆ ಅಡುಗೆ ತಯಾರಕರಿಗೆ ದೂರಿತ್ತರೆ ನಮ್ಮನ್ನು ಗದರಿಸುತ್ತಾರೆ ಎಂದು ವಿದ್ಯಾರ್ಥಿನಿಯರು ಈ ವೇಳೆ ಸ್ಥಳೀಯರಲ್ಲ ಹೇಳಿದ್ದಾರೆ. ಡಿಡಿ ಚಿದಾನಂದ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತುಗ್ಲೇಪ್ಪ ದೇಸಾಯಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.