ಕೊಚ್ಚಿ, ನ 22 (DaijiworldNews/HR): ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ 2015ರ ಪ್ರಕಾರ ಆರೋಪಿಯ ಜನ್ಮ ದಿನಾಂಕದ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿರುವುದಾಗಿ ವರದಿಯಾಗಿದೆ.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಲಯ, ಶಾಲೆಯಿಂದ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕವನ್ನು ಸೂಚಿಸುವ ಸಂಬಂಧಿತ ಪರೀಕ್ಷಾ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪ್ರಮಾಣಪತ್ರವಿದ್ದರೆ, ಸೆಕ್ಷನ್ 94(2)(2) ಅಡಿಯಲ್ಲಿ ಆರೋಪಿಯ ವಯಸ್ಸಿನ ಪುರಾವೆಯಾಗಿ ಹೇಳಿದ ದಾಖಲೆ ಮಾತ್ರ ಸ್ವೀಕಾರಾರ್ಹ ಎಂದಿದೆ.
ಇನ್ನು 13 ವರ್ಷದ ಬಾಲಕಿಯನ್ನು ಆಕೆಯ ತಾಯಿಯ ಕಸ್ಟಡಿಯಿಂದ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಲಕನೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಪರಿಶೀಲಿಸುವ ವೇಳೆ ಈ ರೀತಿ ಹೇಳಿದೆ.