ಜಮ್ಮು, ನ 22 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಎರಡು ಪ್ರತ್ಯೇಕ ಪ್ರಯತ್ನಗಳನ್ನು ಬಿಎಸ್ಎಫ್ ಯೋಧರು ವಿಫಲಗೊಳಿಸಿರುವ ಘಟನೆ ನಡೆದಿದೆ.
ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಓರ್ವ ಪಾಕ್ ಉಗ್ರನನ್ನು ಸೇನೆ ಹೊಡೆದುರುಳಿಸಿದ್ದು, ಮತ್ತೋರ್ವನನ್ನು ಬಂಧಿಸಿದೆ ಎಂದು ಗಡಿ ರಕ್ಷಣಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಇನ್ನು ಜಮ್ಮುವಿನ ಅರ್ನಿಯಾ ಸೆಕ್ಟರ್ ಮತ್ತು ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್ನಲ್ಲಿ ಇಂದು ಮುಂಜಾನೆ ಭಾರತದ ಗಡಿ ಒಳನುಸುಳುವಿಕೆ ಯತ್ನಿಸಿದ್ದು, ಇದನ್ನು ಬಿಎಸ್ಎಫ್ ಯೋಧರು ವಿಫಲಗೊಳಿಸಿದ್ದಾರೆ.