ನ 22 (DaijiworldNews/HR): ಬೀದಿ ನಾಯಿಗಳಿಗೆ ತನ್ನ ಹಾಸಿಗೆಯಲ್ಲಿ ನಿರಾಶ್ರಿತ ವ್ಯಕ್ತಿಯೊಬ್ಬರು ಆಶ್ರಯ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪೋಟೊವನ್ನು ಐಎಫ್ಎಸ್ (ಭಾರತೀಯ ಅರಣ್ಯ ಸೇವೆ) ಅಧಿಕಾರಿ ಸುಸಂತ ನಂದಾ ಹಂಚಿಕೊಂಡಿದ್ದಾರೆ.
ಮನೆಯಿಲ್ಲದ ವ್ಯಕ್ತಿಯೊಬ್ಬರು ರಸ್ತೆಯ ಬದಿಯ ಅಂಗಡಿಯೊಂದರ ಮುಂದೆ ಬಟ್ಟೆಯೊಂದನ್ನು ಹಾಸಿ ಮಲಗಿದ್ದು, ವ್ಯಕ್ತಿಯೊಂದಿಗೆ ಬೀದಿ ನಾಯಿಗಳೂ ಸಹ ಮಲಗಿವುದನ್ನು ಪೋಟೊದಲ್ಲಿ ನೋಡಬಹುದು.
ಇನ್ನು ಈ ಹೃದಯಸ್ಪರ್ಶಿ ಪೋಟೊವನ್ನು ನೋಡಿದ ನೆಟ್ಟಿಗರು ವ್ಯಕ್ತಿಯನ್ನು ಹೊಗಳುತ್ತಿದ್ದು, ಈ ಪೋಟೊಗೆ ಅನೇಕ ರೀತಿಯ ಕಾಮೆಂಟ್ ಗಳು ಬಂದಿದೆ.