ಫರೀದಾಬಾದ್, ನ 22 (DaijiworldNews/DB): ಬಂಡೆ ಮೇಲೆ ಹತ್ತಿ ಸೆಲ್ಫೀ ತೆಗೆದುಕೊಳ್ಳುವಾಗ ವ್ಯಕ್ತಿಯೊಬ್ಬ ಆಯತಪ್ಪಿ ಕಂದಕಕ್ಕೆ ಬಿದ್ದು ಮೃತಪಟ್ಟ ಘಟನೆ ಗುರುಗ್ರಾಮ್-ಫರೀದಾಬಾದ್ ರಸ್ತೆಯ ಬಳಿ ನಡೆದಿದೆ.
ಫರಿದಾಬಾದ್ ನ ಬಾಲಬ್ಗಢ್ನ ಆದರ್ಶ ನಗರ ನಿವಾಸಿ ಕಮಲ್ (42) ಮೃತ ವ್ಯಕ್ತಿ. ಗುರುಗ್ರಾಮ್-ಫರಿದಾಬಾದ್ ರಸ್ತೆಯ ಅರವಲ್ಲಿಸ್ನ ವೈಂದಾ ರಾಕ್ ಗಣಿ ಬಳಿಯ ಬಂಡೆಯ ಮೇಲೆ ಹತ್ತಿ ಇವರು ಸೆಲ್ಫೀ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಆಯತಪ್ಪಿ ಬಂಡೆ ಮೇಲಿಂದ ಕೆಳಗಿನ ಕಂದಕಕ್ಕೆ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದಕ್ಕೂ ಮೊದಲು ತನ್ನಿಬ್ಬರು ಸ್ನೇಹಿತರಾದ ರವಿ ಮತ್ತು ಹಮೇಂದ್ರ ಅವರೊಂದಿಗೆ ಮದ್ಯ ಸೇವನೆ ಮಾಡಿದ್ದರು ಎಂದು ತಿಳಿದು ಬಂದಿದೆ. ಫರೀದಾಬಾದ್ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಶವ ಮಹಜರು ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.