ಭುವನೇಸ್ವರ, ನ 21 (DaijiworldNews/HR): ಒಡಿಶಾದ ಜಾಜ್ಪುರ ಜಿಲ್ಲೆಯ ಕೊರೆ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿತಪ್ಪಿ ರೈಲು ನಿಲ್ದಾಣಕ್ಕೆ ನುಗ್ಗಿದ ಪರಿಣಾಮ ಮೂವರು ಸಾವನ್ನಪ್ಪಿ, ಅನೇಕ ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ವೇಗವಾಗಿ ಬಂದ ಗೂಡ್ಸ್ ರೈಲು ಹಳಿತಪ್ಪಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಢಿಕ್ಕಿ ಹೊಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಏಳು ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಹಳಿತಪ್ಪಿದ ಬೋಗಿಗಳು ಪ್ರಯಾಣಿಕರು ಕಾಯುತ್ತಿದ್ದ ನಿಲ್ದಾಣಕ್ಕೆ ನುಗ್ಗಿ ವೇಟಿಂಗ್ ರೂಂ, ಟಿಕೆಟ್ ಕೌಂಟರ್ ಮತ್ತು ಸ್ಟೇಷನ್ ಮಾಸ್ಟರ್ ಕಚೇರಿಗೆ ಬಡಿದಿವೆ ಎಂದು ವರದಿಯಾಗಿದೆ.