ಗುಜರಾತ್, ನ 20 (DaijiworldNews/HR): ಗುಜರಾತ್ನಲ್ಲಿ ಬಿಜೆಪಿಯು ತನ್ನ ಪ್ರಮುಖ ಏಳು ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದ್ದು, ಪಕ್ಷದ ಆದೇಶದ ಹೊರತಾಗಿಯೂ ಅಮಾನತುಗೊಂಡ ನಾಯಕರು ತಮ್ಮ ನಾಮಪತ್ರ ಸಲ್ಲಿಸಿದ್ದು, ಅವರ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿದೆ.
ಟಿಕೆಟ್ ನಿಕಾರಿಸಿದ ಹಿನ್ನೆಲೆಯಲ್ಲಿ ಬಂಡೆದಿದ್ದ ಈ ಏಳು ನಾಯಕರು ಪೈಕಿ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ ಮತ್ತು ಒಬ್ಬರು ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಇನ್ನು ಡಿಸೆಂಬರ್ 1ರಂದು ನಡೆಯಲಿರುವ ಮೊದಲ ಹಂತದ ಮತದಾನ ಪ್ರದೇಶಗಳಲ್ಲಿ ಈ ಏಳೂ ಜನರ ಕ್ಷೇತ್ರಗಳಿದ್ದು, ಬಿಜೆಪಿಯ ಮಾಜಿ ಶಾಸಕರಾದ, ಬಿಜೆಪಿಯ ಬುಡಕಟ್ಟು ಸಮುದಾಯದ ಮುಖವಾಗಿರುವ ಹರ್ಷದ ವಾಸವಾ, ಅರವಿಂದ್ ಲಾದಾನಿ ಅವರು ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ.