ಪಂಜಾಬ್, ನ 20 (DaijiworldNews/HR): ಪಾಕಿಸ್ತಾನದ ಎರಡು ಡ್ರೋನ್ ಗಳು ಪತ್ತೆಯಾಗಿರುವ ಘಟನೆ ಗುರುದಾಸ್ಪುರ ಜಿಲ್ಲೆಯ ಕಸ್ಸೋವಾಲ್ ಪ್ರದೇಶದ ಭಾರತ ಮತ್ತು ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಸಮೀಪ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ಯೋಧರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಡ್ರೋನ್ ಗಳು ಪಾಕಿಸ್ತಾನಕ್ಕೆ ಹಿಂತಿರುಗಿದವು ಎಂದು ಹೇಳಿದ್ದಾರೆ.
ಇನ್ನು ಈ ಡ್ರೋನ್ಗಳ ಮೇಲೆ ಬಿಎಸ್ಎಫ್ ಯೋಧರು ಕನಿಷ್ಠ 96 ಸುತ್ತು ಗುಂಡು ಹಾರಿಸಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.