ಮಧ್ಯ ಪ್ರದೇಶ, ನ 20 (DaijiworldNews/HR): ಮಧ್ಯ ಪ್ರದೇಶದ ರಾಜ್ಗಢ ಜಿಲ್ಲೆಯ ಆಸ್ಪತ್ರೆಯ ಐಸಿಯು ವಾರ್ಡ್ ಗೆ ದನವೊಂದು ನುಗ್ಗಿದ್ದು, ಅತ್ತಿತ್ತ ಓಡುತ್ತಾ, ಕಸದ ಬುಟ್ಟಿಯಲ್ಲಿರುವ ಮೆಡಿಕಲ್ ತ್ಯಾಜ್ಯವನ್ನು ತಿಂದಿರುವ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ ಕೂಡ ಇಡೀ ದಿನ ದನವನ್ನು ಆಸ್ಪತ್ರೆಯ ಹೊರ ಹಾಕಲು ಯಾರಿಂದಲೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ರಸ್ತೆ ಬದಿಯೇ ಆಸ್ಪತ್ರೆ ಇರುವುದಿಂದ ಆಸ್ಪತ್ರೆಯಲ್ಲಿ ದನ ಹಿಡಿಯಲು ಇಬ್ಬರನ್ನು ಈ ಹಿಂದೆಯೇ ನೇಮಿಸಲಾಗಿತ್ತು. ಆದರೆ ಘಟನೆ ನಡೆದಾಗ ಅವರೂ ಕೂಡ ಅಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.
ದನ ಐಸಿಯು ವಾರ್ಡ್ ನ ಮುಂದೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.