ಬಂಗಾರಪೇಟೆ, ನ 20 (DaijiworldNews/HR): ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡಬಾರದು. ಜೆಡಿಎಸ್, ಕಾಂಗ್ರೆಸ್ ಮತ ಹೆಚ್ಚಿರುವ ಕಡೆ ಮತದಾರರನ್ನು ಕೈಬಿಟ್ಟಿದ್ದಾರೆ. ಕಾಂಗ್ರೆಸ್ ಈಗಾಗಲೇ ದೂರನ್ನು ಕೊಟ್ಟಿದ್ದು, ನಮ್ಮ ಪಕ್ಷದಿಂದಲೂ ಚುನಾವಣಾ ಆಯೋಗಕ್ಕೆ ದೂರು ಕೊಡಲು ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಚಿಲುಮೆ ಕಚೇರಿ ಮೇಲೆ ನಡೆದ ದಾಳಿ ವೇಳೆ ದುಡ್ಡು, ಮಂತ್ರಿಯೊಬ್ಬರ ಖಾಲಿ ಚೆಕ್ ಸಿಕ್ಕಿದೆ ಅನ್ನುವ ಮಾಹಿತಿ ಇದೆ. ಮಂತ್ರಿಯ ದುಡ್ಡು, ಚೆಕ್ ಅಲ್ಲಿ ಏಕಿತ್ತು. ಆ ಮಂತ್ರಿಯನ್ನು ಇಟ್ಟುಕೊಂಡು ಯಾವ ತನಿಖೆ ನಡೆಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರೋದಕ್ಕೆ ಜೆಡಿಎಸ್ ಪಂಚರತ್ನ ಯಾತ್ರೆ ಮಾಡುತ್ತಿದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಅಧಿಕಾರಕ್ಕೆ ಬರದೆ, ಕಾಂಗ್ರೆಸ್ ಅಧಿಕಾರಕ್ಕೆ ಬರದೆ ಇನ್ನು ಯಾರು ಅಧಿಕಾರಕ್ಕೆ ಬರಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.