ನವದೆಹಲಿ, ನ 20 (DaijiworldNews/HR): ಗಾಜಿಯಾಬಾದ್ನ ರಾಡಿಸನ್ ಬ್ಲೂ ಹೋಟೆಲ್ನ ಮಾಲೀಕ ಅಮಿತ್ ಜೈನ್ ಅವರು ತಮ್ಮ ದೆಹಲಿಯ ಕಾಮನ್ ವೆಲ್ತ್ ವಿಲೇಜ್ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದೆಹಲಿಯ ಮಾಂಡವಲಿ ಪೊಲೀಸ್ ಠಾಣೆಗೆ ಶನಿವಾರ ಕರೆ ಬಂದಿದ್ದು, ಕಾಮನ್ವೆಲ್ತ್ ಗೇಮ್ಸ್ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಅಮಿತ್ ಜೈನ್ ಅವರು ಕೌಶಂಬಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ಮಾಲೀಕ ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತ್ ಜೈನ್ ಕಾಮನ್ವೆಲ್ತ್ ಗೇಮ್ಸ್ ಗ್ರಾಮದಲ್ಲಿರುವ ಕರೆ ಮಾಡಿದವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.