ನವದೆಹಲಿ, ನ 19 (DaijiworldNews/HR): ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರು ತಮ್ಮ ಜೈಲಿನ ಸೆಲ್ನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಮತ್ತು ಸಂದರ್ಶಕರನ್ನು ಸ್ವೀಕರಿಸುತ್ತಿರುವ ವಿಡಿಯೋಗಳ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಆಮ್ ಆದ್ಮಿ ಪಕ್ಷ 'ಸ್ಪಾ ಮತ್ತು ಮಸಾಜ್ ಪಾರ್ಟಿಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸತ್ಯೇಂದ್ರ ಜೈನ್ ಅವರ ವಿಡಿಯೋವನ್ನು ಶೇರ್ ಮಾಡಿದೆ.
ಇನ್ನು ಕೇಜ್ರಿವಾಲ್ ಈಗ ಎಲ್ಲಿ ಅಡಗಿದ್ದಾರೆ. ನಿಯಮಗಳು ಮತ್ತು ಜೈಲು ಕಾನೂನುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಜೈನ್ ತನ್ನ ಸೆಲ್ನಲ್ಲಿ ಮಸಾಜ್ ಮಾಡುವುದನ್ನು ಮತ್ತು ಸಂದರ್ಶಕರನ್ನು ಭೇಟಿಯಾಗುವುದನ್ನು ಕಾಣಬಹುದು ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.