ನವದೆಹಲಿ, ನ 18 (DaijiworldNews/DB): ಗುಜರಾತ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳು ವಿವಿಧ ರೀತಿಯ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಇನ್ನು ಬಿಜೆಪಿಯು ಪ್ರಚಾರಕ್ಕಾಗಿ ರೋಬೋಟ್ ಬಳಕೆ ಮಾಡಿರುವುದು ಗಮನ ಸೆಳೆದಿದೆ.
ಗುಜರಾತ್ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಪ್ರಧಾನಿ ಮೋದಿ ತವರು ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಯೋಜಿಸಿದರೆ, ಸತತ ಏಳನೇ ಬಾರಿಗೆ ಗೆಲುವಿನ ನಗೆ ಬೀರಲು ಬಿಜೆಪಿ ಪ್ರಯತ್ನಿಸುತ್ತಿದೆ. ಇನ್ನು ಕಾಂಗ್ರೆಸ್ ಕೂಡಾ ಗುಜರಾತ್ ಗೆಲ್ಲಲು ಪ್ರಚಾರನಿರತವಾಗಿದೆ. ಈ ನಡುವೆ ತಾಂತ್ರಿಕ ಕೌಶಲವನ್ನೂ ಬಳಸಿಕೊಂಡಿರುವ ಬಿಜೆಪಿ ಪ್ರಚಾರಕ್ಕಾಗಿ ರೋಬೋಟ್ನ್ನು ಬಳಸಿಕೊಂಡಿದೆ.
ಮನೆಮನೆ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳು ಕರಪತ್ರ ಹಂಚಲು ರೋಬೋಟ್ನ್ನು ಬಳಕೆ ಮಾಡುತ್ತಿದ್ದಾರೆ. ರೋಬೋಟ್ನಲ್ಲಿ ಸ್ಟಿಕರ್ ಲಗತ್ತಿಸಲಾಗಿದ್ದು, ಚುನಾವಣಾ ಘೋಷಣೆಗಳನ್ನೂ ಪ್ರಚುರಪಡಿಸುತ್ತಿದೆ. ಈ ರೋಬೋಟ್ನ್ನು ಹರ್ಷಿತ್ ಪಟೇಲ್ ಎಂಬವರು ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.