ನವದೆಹಲಿ, ನ 18 (DaijiworldNews/DB): ವಿದೇಶಾಂಗ ಸಚಿವಾಲಯದಲ್ಲಿ ಚಾಲಕನಾಗಿದ್ದ ವ್ಯಕ್ತಿಯನ್ನು ಬೇಹುಗಾರಿಕೆ ಆರೋಪದ ಮೇಲೆ ದೆಹಲಿಯ ಜವಾಹರ್ ಲಾಲ್ ನೆಹರು ಭವನದಲ್ಲಿ ಶುಕ್ರವಾರ ಬಂಧಿಸಲಾಗಿದೆ.
ಪೂನಂ ಶರ್ಮಾ ಎಂಬ ಮಹಿಳೆಯಂತೆ ವೇಷ ಮರೆಸಿಕೊಂಡು ಪಾಕಿಸ್ತಾನಿ ವ್ಯಕ್ತಿಯೊಬ್ಬನಿಗೆ ದೇಶದ ಗುಪ್ತ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಈತ ನೀಡುತ್ತಿದ್ದ. ಹಣಕ್ಕಾಗಿ ಈ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ದೇಶದ ಗುಪ್ತ ಮಾಹಿತಿ ಹಂಚಿಕೆ ಮೂಲಕ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಹನಿ ಟ್ರ್ಯಾಪ್ ಮೂಲಕ ಈತ ದೇಶದ ಗುಪ್ತ ಮಾಹಿತಿಗಳನ್ನು ಪಾಕ್ ವ್ಯಕ್ತಿಗೆ ರವಾನಿಸಲು ಪ್ರಯತ್ನ ನಡೆಸುತ್ತಿದ್ದ ಎನ್ನಲಾಗಿದೆ.