ನವದೆಹಲಿ, ನ 18 (DaijiworldNews/DB): ವಿಶ್ವಾದ್ಯಂತ ದೈತ್ಯ ಕಂಪೆನಿಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಪರ್ವ ಮುಂದುವರಿದಿದ್ದು, ಈ ತಿಂಗಳ ಮೊದಲಾರ್ಧ 38 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಫೇಸ್ಬುಕ್ ಮಾತೃ ಸಂಸ್ಥೆ ಮೆಟಾದಲ್ಲಿ ಅತಿ ಹೆಚ್ಚು ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ನವೆಂಬರ್ 9ರಂದು, 11 ಸಾವಿರ ಮಂದಿಯನ್ನು ಫೇಸ್ಬುಕ್ ಕೆಲಸದಿಂದ ವಜಾಗೊಳಿಸಿದೆ. ಇನ್ನು ಅಮೆಜಾನ್ನಲ್ಲಿ ನವೆಂಬರ್ 16ರಂದು 10 ಸಾವಿರ, ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ನವೆಂಬರ್ 4ರಂದು 3,700 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ವಿವಿಧ ಕಂಪೆನಿಗಳು ಸೇರಿ ಈವರೆಗೆ ಒಟ್ಟು 37,866 ಮಂದಿ ಉದ್ಯೋಗ ನಷ್ಟ ಹೊಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ರೇ ಡೇಲಿಯೋ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ ಪ್ರಕಾರ, ಟೆಕ್ ಉದ್ಯಮವು ಕುಸಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.