ನೋಯ್ದಾ, ನ 18 (DaijiworldNews/HR): ನಾಯಿಯೊಂದು 6 ವರ್ಷದ ಮಗುವಿನ ಮೇಲೆ ನುಗ್ಗಿ ಕಚ್ಚಿದ ನಂತರ ಗ್ರೇಟರ್ ನೋಯ್ಡಾ ಪ್ರಾಧಿಕಾರವು ಸಾಕು ಮಾಲೀಕರಿಗೆ 10,000 ರೂ ದಂಡ ವಿಧಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ನಾಯಿ ಸಾಕು ಮಾಲೀಕರಿಗೆ ಮಗುವಿನ ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದು, ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ನಾವು 15 ನೇ ಮಹಡಿಯಲ್ಲಿ ವಾಸಿಸುತ್ತೇವೆ ಮತ್ತು ನನ್ನ ಮಗ ಶಾಲೆಯಿಂದ ಹಿಂತಿರುಗಿದಾಗ, ನಾವು ನೆಲ ಮಹಡಿಯಿಂದ ಲಿಫ್ಟ್ ಹತ್ತಿದೆವು, ಅದೇ ಸಮಯದಲ್ಲಿ, ಸೊಸೈಟಿಯ ನಿವಾಸಿಯೊಬ್ಬರು ತಮ್ಮ ಸಾಕು ನಾಯಿಯೊಂದಿಗೆ ಲಿಫ್ಟ್ ಅನ್ನು ಪ್ರವೇಶಿಸಿದ್ದು, ನಾಯಿ ಕಚ್ಚುವುದಿಲ್ಲ ಎಂದು ಮಾಲೀಕರು ನನಗೆ ಹೇಳಿದ್ದರು. ಆದರೆ ನಾಯಿಯು ಲಿಫ್ಟ್ಗೆ ಪ್ರವೇಶಿಸಿದಾಗ ಅದು ನನ್ನ ಮಗನಿಗೆ ಕಚ್ಚಿದೆ ಎಂದು ಮಗುವಿನ ತಾಯಿ ಮಾಹಿತಿ ನೀಡಿದ್ದಾರೆ.