ಶ್ರೀಹರಿಕೋಟಾ, ನ 18 (DaijiworldNews/HR): ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಹೆಸರಿನ ರಾಕೆಟ್ ಅನ್ನು ಉಡಾವಣೆ ಮಾಡಲಾಗಿದೆ.
ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಸ್ಮರಣಾರ್ಥ ಸ್ಕೈರೂಟ್ ಸಂಸ್ಥೆಯು ಉಡಾವಣಾ ವಾಹಕಕ್ಕೆ ವಿಕ್ರಮ್ ಎಂದು ನಾಮಕರಣ ಮಾಡಿದೆ.
ವಿಕ್ರಮ್ ಸೀರಿಸ್ನಲ್ಲಿ ಒಟ್ಟು 3 ರಾಕೆಟ್ಗಳಿದ್ದು, ವಿಕ್ರಮ್-ಎಸ್ ರಾಕೆಟ್ 3 ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ಈ ಪ್ರಯೋಗದ ಮೂಲಕ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳು ಅಧಿಕೃತವಾಗಿ ಪ್ರವೇಶ ಪಡೆದಂತಾಗಿದೆ.