ಆಂಧ್ರಪ್ರದೇಶ, ನ 18 (DaijiworldNews/HR): ಖಾಸಗಿ ಕಂಪನಿ ತಯಾರಿಸಿದ ರಾಕೆಟ್ ವಿಕ್ರಮ್ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತಯಾರಾಗಿದ್ದು, ಇಂದು ಬೆಳಗ್ಗೆ 11:30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಯಾಗಲಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಸ್ಮರಣಾರ್ಥ ಸ್ಕೈರೂಟ್ ಸಂಸ್ಥೆ ರಾಕೆಟ್ಗೆ ವಿಕ್ರಮ್ ಎಂದು ಹೆಸರಿಟ್ಟಿದ್ದು, ವಿಕ್ರಮ್ ಸೀರಿಸ್ನಲ್ಲಿ ಒಟ್ಟಾರೆ ಮೂರು ರಾಕೆಟ್ಗಳಿವೆ.
ಇನ್ನು ವಿಕ್ರಮ್-ಎಸ್ ರಾಕೆಟ್ ಇದಾಗಿದ್ದು, ಮೂರು ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ವಿಕ್ರಮ್ ಮೂಲಕ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳ ಪ್ರವೇಶವಾಗಿದೆ.
ಇಂದು ಬೆಳ್ಳಗ್ಗೆ 11:30ಕ್ಕೆ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆಯಾಗಲಿದೆ.