ನವದೆಹಲಿ, ನ 17 (DaijiworldNews/MS): ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾದ ಭಾರತ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್ ಅವರನ್ನು ನೇಮಕ ಮಾಡಲಾಗಿದೆ. ಅಜಿತ್ ಮೋಹನ್ ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲ ದಿನಗಳ ಬಳಿಕ ಸಂಧ್ಯಾ ಅವರ ನೇಮಕವಾಗಿದೆ. ದೇವನಾಥನ್ ಅವರು 2023ರ 1 ಜನವರಿ ರಿಂದ ತಮ್ಮ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಮೆಟಾ ತಿಳಿಸಿದೆ.
2016ರಲ್ಲಿ ಫೇಸ್ಬುಕ್ ಸೇರಿದ್ದ ಸಂಧ್ಯಾ, ಫೇಸ್ಬುಕ್ನ ಷ್ಯಾ-ಪೆಸಿಫಿಕ್ (APAC) ವಿಭಾಗದ ಗೇಮಿಂಗ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನವೆಂಬರ್ 3 ರಂದು, ಮಾಜಿ ದೇಶದ ಮುಖ್ಯಸ್ಥ ಅಜಿತ್ ಮೋಹನ್ ಅವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಫೇಸ್ಬುಕ್ ಸಂಸ್ಥೆಯನ್ನು ಅಜಿತ್ ಮೋಹನ್ ಬಿಟ್ಟು ಸ್ನ್ಯಾಪ್ಚಾಟ್ ಎನ್ನುವ ಸಾಮಾಜಿಕ ಜಾಲತಾಣವಾದ ಸಂಸ್ಥೆಯನ್ನು ಸೇರಿಕೊಂಡಿದ್ದಾರೆ.