ಹೈದ್ರಬಾದ್, ನ 17 (DaijiworldNews/HR): ಹೈದರಾಬಾದ್ನಲ್ಲಿ ನಡೆದ ಅಂಗಾಂಗ ದಾನ ಕಾರ್ಯಕ್ರಮದಲ್ಲಿ ನಟ ವಿಜಯ್ ದೇವರಕೊಂಡ ತಮ್ಮ ಅಂಗಾಂಗಗಳನ್ನು ದಾನ ಮಡುವುದಾಗಿ ಸಹಿ ಹಾಕಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನನ್ನ ಸಾವಿನ ನಂತರ ನನ್ನ ಎಲ್ಲಾ ಅಂಗಾಂಗಗಳನ್ನು ದಾನ ಮಾಡುವ ವ್ಯಕ್ತಿ ನಾನಾಗುವೆ. ಬೇರೊಬ್ಬರ ಸಂತೋಷದ ಭಾಗವಾಗಲು ನಾನು ಇಚ್ಚಿಸುತ್ತೇನೆ ಎಂದರು.
ಇನ್ನು ದಕ್ಷಿಣ ಏಷ್ಯಾದಲ್ಲಿ ಹೆಚ್ಚು ಅಂಗಾಂಗ ದಾನಿಗಳಿಲ್ಲ ಎಂದ ಅವರು, ಎಲ್ಲರೂ ಅಂಗಾಂಗ ದಾನದ ಪ್ರತಿಜ್ಞೆ ಮಾಡುವಂತೆ ಕರೆ ನೀಡಿದ್ದಾರೆ.